top of page

ಶೈನ್ ಶೆಟ್ಟಿ ಮತ್ತು ಪ್ರಿಯಾಂಕಾ ಗಂಡ ಹೆಂಡತಿಯರೇ..?

ಪ್ರಿಯಾಂಕ ತನ್ನ ಪತ್ನಿ ಎಂದು ಮತ್ತು ತಮಗೆ ಒಂದು ಮಗು ಇರುವುದಾಗಿ ಶೈನ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಪ್ರಿಯಾಂಕಾ ಮುಂದೆಯೇ ಹೇಳಿಕೊಂಡಿದ್ದಾರೆ. ಆದರೆ ಪ್ರಿಯಾಂಕ  ಅದು ಸುಳ್ಳು ಎಂದು ಹೇಳಿದ್ದಾರೆ!

SHAIN SHETTY.jpg
Priyanka-Chandrika-2.jpg

ಎರಡನೇ ದಿನ ರಾತ್ರಿ 10.20

ಗುಣ ಚೀಲ ಟಾಸ್ಕ್!

ಒಂದೊಂದು ಗುಣಗಳುಳ್ಳ ಚೀಲಗಳು ಇರುತ್ತವೆ. ಅವುಗಳಲ್ಲಿನ ಗುಣಗಳನ್ನು ಗಮನಿಸಿ ಆಯ್ದುಕೊಳ್ಳಬೇಕಾಗುತ್ತದೆ. ಹಾಗೆ ಆಯ್ದುಕೊಂಡವರು ಅದಕ್ಕೆ ಕಾರಣಗಳನ್ನು ನೀಡಬೇಕಾಗುತ್ತದೆ. ರಾಶಿಯಾಗಿ ನೇತು ಹಾಕಲಾಗಿದ್ದ ಚೀಲಗಳಲ್ಲಿ ಕುರಿ ಪ್ರತಾಪ್ ಪ್ರಾಮಾಣಿಕ ಎನ್ನುವ ಗುಣದ ಚೀಲವನ್ನು, ದೀಪಿಕಾ ಶಕ್ತಿವಂತ  ಎಂದು ಬರೆಯಲಾದ ಚೀಲವನ್ನು ಹರೀಶ್ ರಾಜ್ ಭಾವುಕರು ಎಂದು ಬರೆದಿರುವ ಚೀಲವನ್ನುಆಯ್ಕೆ ಮಾಡುತ್ತಾರೆ. ಅದಕ್ಕೆ ಅವರು ಕಾರಣಗಳನ್ನು ಕೂಡ ನೀಡುತ್ತಾರೆ.

 

ರಾತ್ರಿ 11.40

(ನಿನ್ನೆಯ ಸಂಚಿಕೆಯಲ್ಲಿ ತೋರಿಸಲಾಗಿದ್ದ ಪೆಟ್ಟಿಗೆಯ ಟಾಸ್ಕ್ ಪ್ರಕಾರ ಬಿಗ್ ಬಾಸ್ ಸದಸ್ಯರ ತಂಡವು ಕೆಂಪು ತಂಡ ಮತ್ತು ಹಳದಿ ತಂಡವಾಗಿ ವಿಭಾಗಿಸಲ್ಪಟ್ಟಿರುತ್ತದೆ. ಅದರಂತೆ ಆಯಾ ಗುಣಗಳನ್ನು ಆಯ್ಕೆ ಮಾಡಿದವರ ಆಟ ಮುಂದುವರಿಯುತ್ತದೆ)

ಈ ಆಟದಲ್ಲಿ ದೀಪಿಕಾ ದಾಸ್, ಕುರಿ ಪ್ರತಾಪ್  ,ಹರೀಶ್ ರಾಜ್ , ಕಿಶನ್, ಚೈತ್ರಾ ಕೋಟೂರು ಮೊದಲಾದವರು ಸೋಲು ಕಾಣುತ್ತಾರೆ.

 

ಮಧ್ಯರಾತ್ರಿ 12.55

ಆದರೆ ಇದರಲ್ಲಿ ಉಳಿದಿರುವ ಪ್ರಿಯಾಂಕ, ಚಂದನ್ ಅವರ ಕೈಗಳಿಗೆ ಚೀಲಗಳನ್ನು ಹೆಚ್ಚುವರಿ ಚೀಲಗಳನ್ನು ಹಾಕುವಂತೆ ಬಿಗ್ ಬಾಸ್ ಸೂಚಿಸುತ್ತದೆ. ಪ್ರಿಯಾಂಕ ಕೂಡ ಸೋಲುತ್ತಾರೆ. ಹಾಗೆ ಚಂದನ್  ವಿಜೇತರಾಗುತ್ತಾರೆ. ಬಿಗ್ ಬಾಸ್ ಅಭಿನಂದಿಸುತ್ತಾರೆ.

ಟಾಸ್ಕ್ ನ ವೇಳೆ ತಂದೆಯ ನೆನಪಾಗಿದ್ದಾಗಿ ಹೇಳಿ ಪ್ರಿಯಾಂಕ ಬೆಡ್ ರೂಮ್ ನಲ್ಲಿ ಅಳುತ್ತಾರೆ .

 

2.50 ಮಧ್ಯರಾತ್ರಿ

ಶೈನ್ ಶೆಟ್ಟಿಯ ಜತೆಗೆ ,ಮಾತನಾಡಲು ಬಯಸುವ ಚೈತ್ರಾ ಕೊಟೂರು ಮಾತು. ಆತನ ಬಗ್ಗೆ  ವಿವರವಾಗಿ ವಿಚಾರಿಸುತ್ತಾರೆ. `ನಾನು ಉಡುಪಿಯವನು ,ಪಿಯುಸಿ ಓದಿದ್ದೀನಿ’ ಎಂದು ಶೈನ್ ಹೇಳುತ್ತಾರೆ. ಚೈತ್ರಾ ತಮ್ಮ ಊರು ಕೋಲಾರ ಎಂದು ಹೇಳುತ್ತಾರೆ. ಬಳಿಕ ಶೈನ್ ಪ್ರೀತಿಸುವ ಹುಡುಗಿ ಯಾವ ರೀತಿ ಇರಬೇಕು? ನನ್ನ ಬಗ್ಗೆ ನಿಮಗೆ ಏನು ಅನ್ಸುತ್ತೆ’ ಎಂದು ಕೇಳುತ್ತಾರೆ. ಆದರೆ ಅದಕ್ಕೆ ಶೈನ್ ನಿಮ್ಮ ಬಗ್ಗೆ ನಾನು ಆ ತರಹ ಯೋಚಿಸಿಲ್ಲ ಎನ್ನುತ್ತಾರೆ. ನೀವು ತುಂಬಾ ಓದಿದ್ದೀರಿ, ತುಂಬಾ ಬರೆಯುತ್ತೀರಿ, ಸಿನಿಮಾದಲ್ಲಿ ನಟಿಸಿದ್ದೀರಿ. ನಿಮಗೆ ಮದುವೆ ಆಗುವುದಾದರೆ ನಿಮ್ಮಅಭಿರುಚಿಯ ಹುಡುಗ ಸಿಗಬಹುದಲ್ಲವೇ? ಎಂದು ಶೈನ್ ಪ್ರಶ್ನಿಸುತ್ತಾರೆ.  ಅದಕ್ಕೆ `ಚೈತ್ರಾ ನಿಮಗೆ ಆ ಅಭಿರುಚಿ ಇಲ್ವಾ’ ಎಂದು ಮರು ಪ್ರಶ್ನಿಸುತ್ತಾರೆ.  ಕೊನೆಯಲ್ಲಿ ಚೈತ್ರಾ ತಮಾಷೆಗೆ ಮಾತನಾಡಿದ್ದಾಗಿ ಹೇಳುತ್ತಾರೆ.

 

3ನೇ ದಿನ

ಬೆಳಿಗ್ಗೆ 9.00 ಗಂಟೆ – ಬೆಳಗ್ಗಿನ ಹಾಡು

ಬಿಗ್ ಬಾಸ್ ರೇಡಿಯೋ- ರೆಬೆಲ್ ಸ್ಟಾರ್ ನೇರವಾಗಿ ಮಾತಾಡ್ತಿದ್ರು, ನೀವು ಮಾತಾಡಿ ಎಂದು ಸೂಚನೆ.

 

10.00 ಗಂಟೆ

ಜಿಮ್ ಏರಿಯಾದಲ್ಲಿ ಹರೀಶ್ ಅವರು ರಾಜು ಅವರ ವಾಯ್ಸ್ ಮಿಮಿಕ್ರಿ ಮಾಡ್ತಾರೆ.

 

11.45 ನಿಮಿಷ

ಬಿಗ್ ಬಾಸ್ ಧ್ವನಿ- ಚಂದನಾರಲ್ಲಿ- ಎಸ್.ಎಸ್.ಎಲ್.ಸಿ ಯಲ್ಲಿ ತೆಗೆದುಕೊಂಡ ಅಂಕ ಎಷ್ಟು, ಕಾಪಿ ಮಾಡಿದ್ದೀರಾ ಎಂದು ಪ್ರಶ್ನಿಸುತ್ತಾರೆ. ಬಳಿಕ ಸುದೀಪ್  ನೀಡಿದ ಲಕೋಟೆ ಓಪನ್ ಮಾಡುವಂತೆ ಸೂಚನೆ ಬರುತ್ತದೆ. ಅದರಲ್ಲಿ `ಅಮ್ಮ ಮಗ ಒಟ್ಟಿಗೆ ಎಸ್ ಎಸ್ ಎಲ್ ಸಿ ಎಕ್ಸಾಮ್ ಬರೆದರೆ ಮಗ ಫೈಲ್, ಅಮ್ಮ ಪಾಸ್’ ಎನ್ನುವ ಸಾಲು ಇರುತ್ತದೆ.

 

12.20 ನಿಮಿಷ

ಜೈಜಗದೀಶ್ ಅವರು ರಾಜು ತಾಳಿಕೋಟೆ ಜತೆಗೆ ಬಿಗ್ ಬಾಸ್  ಮನೆಯ ಒಳಗಿನ  ರೇಶನ್ ಬಗ್ಗೆ, ಅದರ ಲಿಮಿಟೇಶನ್ ಮಾತನಾಡುತ್ತಾರೆ.

ಬಿಗ್ ಬಾಸ್ ನಿಂದ ಜೈಜಗದೀಶ್ ಅವರಿಗೆ ‘ಹಚ್ಚೆಯನ್ನು ಹಾಕಿಸಿಕೊಂಡಿದ್ದೀರಾ? ಹಚ್ಚೆ ಹಾಕೋದಾದರೆ ಯಾರದು ಹಾಕ್ತೀರಾ ?’ ಎನ್ನುವ ಪ್ರಶ್ನೆ ಕೇಳಲಾಗುತ್ತದೆ. ಬಳಿಕ ಸುದೀಪ್ ನೀಡಿದ ಲಕೋಟೆ ಒಡೆದಾಗ ಅದರಲ್ಲಿನ ಸಾಲು ಈ ರೀತಿಯಲ್ಲಿರುತ್ತದೆ. “ಮದುವೆ ಆಗು ವವರಿಗೆ ಇಷ್ಟ ಆಗುತ್ತೋ ಇಲ್ವೋ, ಟ್ಯಾಟು ಹಾಕೋ ಆಸೆ ಇದ್ರೂ ಹಾಕಿಸಿಕೊಳ್ಳಲಿಲ್ಲ”

 

ಮಧ್ಯಾಹ್ನ 1.10

ರವಿ ಬೆಳಗೆರೆ ಚಿತ್ರರಂಗದ ಬಗ್ಗೆ, ಸಾಹಿತಿಗಳ ಬಗ್ಗೆ ತಾವು ತಿಳಿದುಕೊಂಡ ಒಂದಷ್ಟು ವಿಚಾರಗಳನ್ನು ಸದಸ್ಯರೊಂದಿಗೆ ಹಂಚಿಕೊಳ್ಳುತ್ತಾರೆ. ಲಿವಿಂಗ್ ರೂಂ ನಲ್ಲಿ ಕಿಶನ್, ಕುರಿ ಪ್ರತಾಪ್, ಶೈನ್ ಶೆಟ್ಟಿ ಬಾತ್ ರೂಂ ಬಾಯ್ಸ್ ಅಂತ ಡ್ಯಾನ್ಸ್ ಮಾಡುತ್ತಾರೆ.

 

ಮಧ್ಯಾಹ್ನ 2.00 ಗಂಟೆ

ಚೈತ್ರಾ ವಾಸುದೇವನ್ ಅವರಿಗೆ ಬಿಗ್ ಬಾಸ್ ಪ್ರಶ್ನೆ. `ಎಕ್ಸಾಮ್ ಗೆ ಹೆದರಿದ್ದೀರಾ? ರಿಸಲ್ಟ್ ಬರೋ ಮುಂಚೆ ಏನು ಮಾಡ್ತಾ ಇದ್ರಿ?’ ಬಳಿಕ ಸುದೀಪ್ ನೀಡಿದ್ದ ಲಕೋಟೆ ತೆರೆದಾಗ ಅದರಲ್ಲಿದ್ದ ವಾಕ್ಯ `ಎಸ್ ಎಸ್ ಎಲ್ ಸಿ  ರಿಸಲ್ಟ್  ಭಯಕ್ಕೆ ಊರು ಬಿಟ್ಟು ರಿಸಲ್ಟ್ ಬಂದಾಗ ಪಾಸಾಗಿದ್ದೆ’

 

ಮಧ್ಯಾಹ್ನ 2.55 ನಿಮಿಷ

ಹರೀಶ್ ರಾಜ್ ಅವರಿಗೆ ಬಿಗ್ ಬಾಸ್ ಪ್ರಶ್ನೆ `ಗಾಡಿಯಲ್ಲಿ ಹೋಗಬೇಕಾದ್ರೆ ಬೆಕ್ಕು ಅಡ್ಡ ಬಂದ್ರೆ ಅಪಶಕುನ ಎಂದು ನಂಬ್ತೀರಾ ?’ ಎನ್ನುವುದಾಗಿರುತ್ತದೆ.

ಸುದೀಪ್ ನೀಡಿದ ಲಕೋಟೆಯಲ್ಲಿ `ಹುಟ್ಟಿದಾಗಿನಿಂದ ಅಪಶಕುನದ ಮೊಟ್ಟೆ ಅಂತ ಬೆಳೆದವರು’ ಎನ್ನುವ ವಾಕ್ಯ ಬರೆದಿರುತ್ತದೆ.

ಕುರಿ ಪ್ರತಾಪ್ ಅವರಿಗೆ  ಬಿಗ್ ಬಾಸ್ ಪ್ರಶ್ನೆ “ನಿದ್ದೆ ಮಾಡೋದಂದ್ರೆ ತುಂಬಾ ಇಷ್ಟಾನಾ ? ಇಲ್ಲ- ಬೇರೆಯವರ ಗೊರಕೆಯಿಂದ ನಿಮ್ಮ ನಿದ್ದೆ ಹಾಳಾಗಿದ್ಯಾ ?’’ ಎನ್ನುವುದಾಗಿರುತ್ತದೆ.  ಲಕೋಟೆತೆರೆದಾಗ ಅದರಲ್ಲಿ –ಬೆಳಗ್ಗಿನ ಜಾವದ ತನಕ ನಿದ್ದೆಗೆಟ್ಟು ಓದಿದ್ರೆ ಬೆಳಗ್ಗೆ ಬಸ್ಸಲ್ಲೇ ನಿದ್ದೆ  ಮಾಡಿ ಪರೀಕ್ಷೆ ಮಿಸ್ ಆಯಿತು ಎನ್ನುವ ಸಾಲು ಇರುತ್ತದೆ.

 

ಸಂಜೆ 5.30

ಲಕೋಟೆಯಲ್ಲಿನ ವಾಕ್ಯದ ಬಗ್ಗೆ ತಲೆ ಕೆಡಿಸಿಕೊಂಡ ಕುರಿ ಪ್ರತಾಪ್ ಅವರನ್ನು ಕಿಶನ್ ತಮಾಷೆ ಮಾಡುತ್ತಾರೆ. ಕೊನೆಗೂ ಕನ್ಫೆಶನ್ ರೂಂ ನಲ್ಲಿ ಕುರಿ ಪ್ರತಾಪ್- ಚಂದನಾ ಅಂತ ಉತ್ತರ ಹೇಳುತ್ತಾರೆ.

 

ರಾತ್ರಿ 10.20

ಗಾರ್ಡನ್ ಏರಿಯಾದಲ್ಲಿ ಹರೀಶ್ ರಾಜ್ , ಶೈನ್ ಶೆಟ್ಟಿ, ಪ್ರಿಯಾಂಕ, ಭೂಮಿ ಶೆಟ್ಟಿ, ವಾಸುಕಿ ವೈಭವ್ ಮಾತು. ಶೈನ್ ಶೆಟ್ಟಿ ಪ್ರಿಯಾಂಕ ನಿಜದಲ್ಲಿ ತನ್ನ ಪತ್ನಿ ಎನ್ನುವಂತೆ ಅಲ್ಲಿದ್ದವರಿಗೆ ಬಿಂಬಿಸಿದಾಗ ಆಕೆ ಶೈನ್ ಕೈಗೆ ರಾಖಿ ಕಟ್ಟಲು

Rate UsDon’t love itNot greatGoodGreatLove itRate Us
bottom of page