ನಾ ಕಂಡಂತೆ ದರ್ಶನ್

(ಕನ್ನಡ ಚಿತ್ರರಂಗದ ಯುವ ಸಂಭಾಷಣೆಕಾರ, ಪ್ರತಿಭಾವಂತ ' ಪ್ರಶಾಂತ್ ರಾಜಪ್ಪ' ಅವರು ಈ ಬಾರಿ ' ನಾ ಕಂಡಂತೆ ದರ್ಶನ್' ಜೊತೆಗಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.)
ಬೇರೆ ಸ್ಟಾರ್ ಗಳಿಗೆ ಟಾಂಗ್ ಕೊಡೋ ಡೈಲಾಗ್ ನನಗೆ ಬರೀಬೇಡಿ ಎಂದ ದರ್ಶನ್ !
ನಾನು ಮೆಜೆಸ್ಟಿಕ್ ಸಿನಿಮಾ ನೋಡಿದಾಗಿನಿಂದಲೇ ದರ್ಶನ್ ಅವರಿಗೆ ಫ್ಯಾನ್. ಆವಾಗ ನಾನು ಫಸ್ಟ್ ಪಿ.ಯು.ಸಿ ಯಲ್ಲಿದ್ದೆ. ಬೆಂಗಳೂರಿನ ಪ್ರಸನ್ನ ಥಿಯೇಟರ್ ನಲ್ಲಿ ಜನ ಸೇರ್ಕೊಂಡು ಮಾಡ್ತಾ ಇದ್ರು. ಅದಾದಮೇಲೆ ದರ್ಶನ್ ಅವರ ಎಲ್ಲಾ ಫಿಲ್ಮ್ 50 ಚಿತ್ರಗಳನ್ನು ಕೂಡಾ ನೋಡಿದ್ದೀನಿ. ಅದರಲ್ಲಿ ಕೂಡಾ, 45 ಚಿತ್ರಗಳನ್ನು ಮೊದಲ ವಾರವೇ ನೋಡಿದ್ದೀನಿ.
ದರ್ಶನ್ ಅವರನ್ನು ನಾನು ಮೊದಲು ಮೀಟ್ ಆಗಿದ್ದು'ದಾಸ' ಚಿತ್ರದ ಚಿತ್ರೀಕರಣದ ವೇಳೆ. ಆವಾಗ ನಾನು ದ್ವಿತೀಯ ಪಿಯುಸಿ ಯಲ್ಲಿದ್ದೆ. ನಮ್ಮ ಕಾಲೇಜ್ ಹತ್ರ ರಾಮ ಮಂದಿರದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಆಮೇಲೆ ಕೂಡಾ ದರ್ಶನ್ ಅವರ ಬಹಳಷ್ಟು ಚಿತ್ರಗಳ ಶೂಟಿಂಗ್ ಅಲ್ಲೇ ನಡೆಯುತ್ತಿತ್ತು. ಮೆಜೆಸ್ಟಿಕ್ ಸಾಂಗ್ ಅಲ್ಲೇ ಶೂಟಿಂಗ್ ಆಗಿದ್ದು. ಅಲ್ಲಿ ಹೋಗಿದ್ದೆ ನಾನು. ಕಾಲೇಜು ಮುಗಿಸ್ಬಿಟ್ಟು ಅವರನ್ನು ಭೇಟಿಯಾಗಿ ಮಾತಾಡಿದ್ದೆ. ಶ್ರೀರಾಮ್ ಪುರದಿಂದ ಒಂದಷ್ಟು ಮಂದು ಸ್ಲಂ ಹುಡುಗರು ಬಂದಿದ್ದರು. ಆವಾಗ ಮೊಬೈಲ್ ಕ್ಯಾಮೆರಾ ಇರಲಿಲ್ಲ. ಯಾರೋ ಒಬ್ಬರು ಕ್ಯಾಮೆರಾ ತಗೊಂಡು ಬಂದು ಫೊಟೋಸ್ ತಗೋತಾ ಇದ್ರು. ನಾನು ದರ್ಶನ್ ಅವರಲ್ಲಿ ' ನಮ್ಮ ಪ್ರೀತಿಯ ರಾಮು' ಯಾವಾಗ ರಿಲೀಸ್ ಅಂತ ಕೇಳಿದ್ದೆ. ನಿಜ ಹೇಳಬೇಕೆಂದರೆ ಆ ಕ್ಷಣ ಅವರು ನನ್ನ ಟಕ್ಕಂತ ನನ್ನ ಕಡೆ ನೋಡಿದ್ರು. ಇದೇನು ಎಲ್ಲಾರು ಬಂದು ಮಾಸ್ ಫಿಲ್ಮ್ ಬಗ್ಗೆ ಕೇಳ್ತಾರೆ ಇವನೇನು ಈ ಸಿನಿಮಾ ಬಗ್ಗೆ ಕೇಳ್ತಾ ಇದ್ದಾನೆ ಎಂದು. 'ಅದು ನೆಕ್ಸ್ಟ್ ಆಗುತ್ತೆ' ಅಂದ್ರು. ಆಮೇಲೆ ಅವರು ಹೇಳಿದ ಹಾಗೆ 'ದಾಸ' ಬಂದ ಒಂದು ವಾರದ ವ್ಯತ್ಯಾಸದಲ್ಲಿ ಅದು ಕೂಡಾ ಬಿಡುಗಡೆ ಆಯಿತು ಅಂತ ಅನ್ಸುತ್ತೆ.
ಅದಾದ ಮೇಲೆ ಮತ್ತೆ ಭೇಟಿಯಾಗಿದ್ದು ಇಂಡಸ್ಟ್ರಿ ಗೆ ಬಂದ ಮೇಲೆ.
ಜಗ್ಗೇಶ್ ಜೊತೆ 'ಎದ್ದೇಳು ಮಂಜುನಾಥ' ಚಿತ್ರಕ್ಕೆ ಕೆಲಸ ಮಾಡ್ತಾ ಇದ್ನಲ್ಲ..ನಾನು ಗುರುಪ್ರಸಾದ್ ಅವರಿಗೆ ಅಸಿಸ್ಟೆಂಟ್ ಆಗಿದ್ದೆ. ಆವಾಗ ದರ್ಶನ್ ಅವರದು 'ಅರ್ಜುನ' ಚಿತ್ರ ರಿಲೀಸ್ ಆಗಿತ್ತು ಅಂತ ಕಾಣ್ಸುತ್ತೆ. ರಿಲೀಸ್ ದಿನ ಶೂಟಿಂಗ್ ಗೆ ರಜ ಹಾಕಿ ಮೂವಿಗೆ ಹೋಗ್ಬಿಟ್ಟಿದ್ದೆ. ಆವಾಗ ಜಗ್ಗೇಶ್ ಸರ್ ಕೇಳಿದ್ದಾರೆ ' ಎಲ್ಲಿ ದ್ದಾನೆ ಆ ಹುಡುಗ..ಡೈಲಿ ಕ್ಲ್ಯಾಪ್ ಹೊಡೆತಿದ್ನಲ್ಲ?' ಅಂತ. ಅದಕ್ಕೆ ಗುರು ಸರ್ ಅವರಿಗೆ ಹೇಳಿದ್ದಾರೆ. 'ದರ್ಶನ್ ಫ್ಯಾನ್ ಸರ್ ಅವನು...ತುಂಬಾ ತಿಕ್ಲು ಅಂತ!
ನೀವು ನಂಬಲ್ಲ 'ಎದ್ದೇಳು ಮಂಜುನಾಥ' ಚಿತ್ರ ಆದ ಮೇಲೆ ಸುಮಾರು 4 ವರ್ಷಗಳ ಬಳಿಕ ಜಗ್ಗೇಶ್ ಸರ್ ಸಿಕ್ಕಿದ್ರು. ಅಚಾನಕ್ ಆಗಿ ' ದರ್ಶನ್ ಸಿಕ್ಕಿದ್ನಪ್ಪ ' ಹೋಗಿ ಮೀಟ್ ಮಾಡ್ಕೊಂಡು ಬಾ' ಅಂದ್ರು! ಅವರು ಆಗ ದರ್ಶನ್ ಜೊತೆಗೆ 'ಅಗ್ರಜ' ಅಂತ ಮೂವಿ ಮಾಡುತ್ತಿದ್ರು. ಅಲ್ಲಿ ಜಗ್ಗೇಶ್ ಸರ್ ಮತ್ತು ದರ್ಶನ್ ಅವರಲ್ಲಿ ಎಲ್ಲಾನೂ ಹೇಳಿದ್ದರು. 'ಗುರು ಹತ್ರ ಒಬ್ಬ ಹುಡುಗ ಇದ್ದ.. ನಿನ್ನ ಫ್ಯಾನ್' ಅಂತ. ಆದರೆ ನಾನು ಆಮೇಲೆ ಅವರನ್ನು ಮೀಟಾಗಿದ್ದು ಮಾತ್ರ 'ಸಾರಥಿ' ಫಿಲ್ಮ್ ಶೂಟಿಂಗ್ ಟೈಮಲ್ಲಿ. ಶೂಟಿಂಗ್ ಸ್ಪಾಟ್ ಗೆ ಹೋಗಿ, 'ಜಗ್ಗೇಶ್ ಸರ್ ನನ್ನನ್ನು ನಿಮ್ಮನ್ನು ಮೀಟಾಗೋಕೆ ಹೇಳಿದ್ರು' ಅಂದೆ. ದರ್ಶನ್ ' ಓಹ್ ಸರಿ..ಮೊದಲು ಊಟ ಮಾಡು..' ಅಂದ್ರು. ಊಟ ಬೇಡ ಸರ್ ಅಂದೆ ನಾನು. " ಸಿನಿಮಾದಲ್ಲಿ ಮೊದಲು ಊಟಾನೇ ಗಟ್ಟಿ ಮಾಡಬೇಕಾಗಿರೋದು. ಫಸ್ಟ್ ಊಟ ಬೇಡ ಅನ್ಬಾರ್ದು" ಅಂದ್ರು! ಶೂಟಿಂಗ್ ಬಿಡದಿ ಫಿಲ್ಮ್ ಸಿಟಿಯಲ್ಲಿ ಆಗ್ತಾ ಇತ್ತು. ಅವರ ಪಕ್ಕದ ಟೇಬಲ್ ನಲ್ಲೇ ಕುಳಿತುಕೊಂಡು ಊಟ ಮಾಡಿದೆ. ಅದಾದ ಮೇಲೆ 'ಒಡೆಯ' ಶೂಟಿಂಗ್ ನಲ್ಲಿ ಮೀಟ್ ಆಗಿದ್ದು. ಒಡೆಯ ಚಿತ್ರದಲ್ಲಿ ನಾನೇ ಸಂಭಾಷಣೆ ಬರೆದೆ. " ಬಿಲ್ಡಪ್ ತರಹ ಬರೆಯಬಾರದು. ಅವರವರಿಗೆ ಎಲ್ಲ ಟಾಂಗ್ ಕೊಡೋ ತರಹ ಬರೀಬಾರ್ದು" ಅಂದ್ರು. "ತುಂಬಾ ಹುಷಾರಾಗಿ ಬರೆಯಿರಿ" ಎಂದು ಅವರು ಹೇಳಿದಾಗ ಸೆಟೆಲ್ಡ್ ಆಗಿ ಬರೇತೀನಿ. ಆದರೆ ನಿಮ್ಮ ಬಗ್ಗೆ ಸ್ವಲ್ಪ ಹೈಲೈಟ್ ಮಾಡಿ ಬರೀತೀನಿ' ಅಂದೆ. ಅದೂ ಬೇಡ ಅಂದಿದ್ರು ! ಸೆಕೆಂಡ್ ಹಾಫಲ್ಲೆಲ್ಲ ಸೆಟಲಾಗೇ ಬರೆದಿದ್ದೀನಿ. ಆದ್ರೆ ಫಸ್ಟಲ್ಲಿ ಬಿಲ್ಡಪ್ ಇದ್ದೇ ಇದೆ. ನಾನೇ ಅವರ ಫ್ಯಾನಾಗಿರುವಾಗ ಸ್ವಲ್ಪನಾದ್ರೂ ಬಿಲ್ಡಪ್ ಕೊಡದೇ ಇರೋಕಾಗೋತ್ತಾ?! ಆದರೆ ಬೇರೆ ಸ್ಟಾರ್ ಗಳಿಗಂತೂ ಟಾಂಗ ಕೊಟ್ಟಿಲ್ಲ. ವಿಚಿತ್ರ ಏನೆಂದರೆ ಕೆಲವೊಮ್ಮೆ ನಾವು ಬರೆದಾದ ಮೇಲೆ ನೋಡ್ತಾ ನೋಡ್ತಾ ಫ್ಯಾನ್ಸ್ ಅದನ್ನು ಇನ್ನೊಬ್ಬ ಸ್ಟಾರ್ ಗೆ ಕನೆಕ್ಟ್ ಮಾಡಿ ಬಿಡ್ತಾರೆ. ಆ್ಯಕ್ಚುವಲಿ ನಾನು ಪೊಗರಿನಲ್ಲಿ ಯಾರಿಗೂ ಟಾಂಗ್ ಕೊಡೋಕೆ ಏನೂ ಬರೆದಿರಲಿಲ್ಲ. ಆದರೆ ಆಮೇಲೆ ಜನ ಕಲ್ಪನೆ ಮಾಡಿಕೊಂಡರು. ಈಗ 'ಯಜಮಾನ' ದಲ್ಲಿ ಆನೆ, ಕ್ಯಾಡಬರೀಸ್ ಅಂತೆಲ್ಲ ಬಂತಲ್ಲ? ನಿಜವಾಗಿ ಅದಕ್ಕೆ ಬೇರೆ ಉದ್ದೇಶ ಇರಲ್ಲ ಅದರಲ್ಲಿ. ಜನಗಳು ಕನೆಕ್ಟ್ ಮಾಡಿ ಬಿಡ್ತಾರೆ. ಸೆಕೆಂಡ್ ಹಾಫ್ ನಲ್ಲಿ ಒಂದು ಸೀನ್ ನೋಡ್ಬಿಟ್ಟು ಬೇಜಾರು ಮಾಡ್ಕೊಂಡ್ರು". ಏನಕ್ಕೆ ಇಷ್ಟೊಂದಯ ಬಿಲ್ಡಪ್ ಕೊಟ್ಟಿದ್ದೀರಾ, ಅದನ್ನು ಕಟ್ ಮಾಡಿ" ಅಂತ ಫೋನ್ ಮಾಡಿ ಹೇಳಿದ್ರು. ಆಮೇಲೆ ಚೇಂಜ್ ಮಾಡಿದ್ವಿ.
ನನಗೆ ದರ್ಶನ್ ಸರ್ ಏನಕ್ಕೆ ಇಷ್ಟ ಅಂದ್ರೆ, ಒಂದು ಮಾಸ್ ಸೆಲೆಬ್ರೇಶನ್ ಅಂತ ನಮ್ಮ ಜನರೇಷನ್ ಗೆ ಅಂದರೆ ನಾವು ಸಿನಿಮಾ ನೋಡೋಕೆ ಸ್ಟಾರ್ಟ್ ಮಾಡಿದ್ಮೇಲೆ ಇರೋದೇ ದರ್ಶನ್ ಅವರ ಚಿತ್ರಗಳ ರಿಲೀಸ್. ಹಿಂದಿನವರಿಗೆ ಅಣ್ಣಾವ್ರ ಸಿನಿಮಾಗಳಿದ್ದವು. ಆದರೆ ನಾನು ಆ ಕ್ರೇಜ಼್ ನೋಡಿದ್ದೇ ದರ್ಶನ್ ಸರ್ ಸಿನಿಮಾಗಳ ಮೂಲಕ. ಅವರ ಮೊದಮೊದಲ ಸಿನಿಮಾಗಳ ಸಮಯದಲ್ಲೇ ವಿಜಯನಗರ ಸುತ್ತಮುತ್ತ ಹೋದರೆ ಗೋಡೆ ಮೇಲೆಲ್ಲಾ ಪೋಸ್ಟರ್ ಹಾಕಿರೋರು. ಅದರ ಮೇಲೆ ಹಾರ ಹಾಕೋರು! ಆ ಸಿನಿಮಾ ಕ್ರೇಜ಼್ ಇಷ್ಟ ನನಗೆ. ಏನೇ ಆದರೂ ಮಾಸ್ ಸಿನಿಮಾ ಸೆಲೆಬ್ರೇಶನ್ ಖುಷಿ. ಅವರ ಬರ್ತ್ ಡೇ ದಿನಾನೂ ಅಷ್ಟೇ, ಫ್ಯಾನ್ಸ್ ಸಂಭ್ರಮ ನೋಡೋಕೆ ಮನೆ ಹತ್ರ ಹೋಗುತ್ತೇನೆಯೇ ಹೊರತು, ಅವರನ್ನು ಮೀಟಾಗೋಕೆ ಹೋಗಲ್ಲ!
ಮೆಚ್ಚಿನ ಚಿತ್ರಗಳು ಅವರ ಸಿನಿಮಾಗಳಲ್ಲಿ ಮೆಜೆಸ್ಟಿಕ್, ನನ್ನ ಪ್ರೀತಿಯ ರಾಮು, ಗಜ, ದತ್ತ ಸಿನಿಮಾಗಳು ನನಗೆ ತುಂಬಾ ಇಷ್ಟ. ಅಲ್ಮೋಸ್ಟ್ ಅವರ ಯಾವ ಸಿನಿಮಾಗಳು ಕೂಟ ನಿರಾಸೆ ಮಾಡಿಲ್ಲ. ಅವರ ಎಂಟ್ರಿ, ಲುಕ್ಕೇ ಮಾಸ್.
ಮುಂದಿನ ಭಾಗದಲ್ಲಿ ಚಿತ್ರರಂಗದ ಮತ್ತೋರ್ವ ಗಣ್ಯ ವ್ಯಕ್ತಿ ದರ್ಶನ್ ಅವರ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ.