top of page

ನಾಗೇಂದ್ರ ಪ್ರಸಾದ್

ನಿರ್ದೇಶಕರ ಸಂಘ ಹೇಗಿದೆ?

 

ಚೆನ್ನಾಗಿಯೇ ಇದೆ. ರಾಜೇಂದ್ರ ಸಿಂಗ್ ಬಾಬು ಮತ್ತು ಪುಟ್ಟಣ್ಣ ಕಣಗಾಲ್ ಸೇರಿ ಸ್ಥಾಪಿಸಿದ ಕನ್ನಡ ಚಿತ್ರರಂಗದ ನಿರ್ದೇಶಕರ ಸಂಘ ನಮ್ಮ ದೇಶದಲ್ಲೇ ಪ್ರಥಮ ನಿರ್ದೇಶಕರ ಸಂಘ ಎನ್ನಬಹುದು. ಇದೀಗ  ನನ್ನ ಅವಧಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಣೆ ಮಾಡಲು ಆರಂಭಿಸಿದೆ. ಮುಂದಿನ ಗುರಿ ಹಲವಾರು ಇವೆ. ಅವುಗಳಲ್ಲಿ ಮುಖ್ಯವಾಗಿ ಯಾವುದೇ ಒಬ್ಬ ನಿರ್ದೇಶಕರು ಅನಾರೋಗ್ಯದಲ್ಲಿದ್ದಾಗ ಸಂಘವು ಆರ್ಥಿಕವಾಗಿ ನೆರವು ನೀಡುವ ಮಟ್ಟಕ್ಕೆ ಬೆಳೆಯಬೇಕಿದೆ. ಉಳಿದಂತೆ ಚಲನಚಿತ್ರಕ್ಕೆ ಪೂರಕವಾದ ಶಾಲೆಯನ್ನು ಸಂಘ 15 ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನದ ಜತೆಗೆ ಅಭಿನಯ, ನೃತ್ಯ ಮತ್ತು ಸಂಗೀತದ ತರಬೇತಿಯೂ ಇರುತ್ತದೆ.  ಆಸಕ್ತರು ನಾಗರಭಾವಿಯಲ್ಲಿರುವ ಕಚೇರಿಯನ್ನು ಸಂಪರ್ಕಿಸಬಹುದು. ಇಲ್ಲಿ ನಾನು ಸದಾ ನೆನಪಿಸಿಕೊಳ್ಳುವಂಥ ಕು.ವೆಂ.ಪು ಅವರ ಒಂದು ಮಾತನ್ನು ಹೇಳಲೇಬೇಕು. ಅದುವೇ `ಟೀಕೆಗಳು ಸಾಯುತ್ತವೆ, ಕೆಲಸಗಳು ಮಾತ್ರ ಉಳಿಯುತ್ತವೆ.’ ಇದನ್ನೇ ನಂಬಿಕೊಂಡು ಕೆಲಸ ಮಾಡುತ್ತೇನೆ.

V_Nagendra_Prasad_portrait.jpg
bottom of page