top of page

ದೇಸಿ ಸೃಜನಶೀಲತೆಯ ಆಗರ ಪ್ರಶಾಂತ್ ಸಾಗರ

Prashanth Sagara 1.JPG

ಮೊದಲ ನೋಟಕ್ಕೆ ಕಾಲೇಜ್ ಹುಡುಗನಂತೆ ಕಾಣಿಸುವ ಪ್ರಶಾಂತ್ ಸಾಗರ ಕನ್ನಡ ಚಿತ್ರರಂಗದ ಯುವ ಪ್ರತಿಭೆ. ಕಳೆದ ಏಳು ವರ್ಷಗಳಿಂದ ಸಹಾಯಕ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದ ಇವರ ಪ್ರತಿಭೆಯನ್ನು ಅನಾವರಣಗೊಳಿಸಿದ್ದು, ಖುದ್ದು ನಿರ್ದೇಶಿಸಿ ಛಾಯಾಗ್ರಹಣ ನಿರ್ವಹಿಸಿದ ಶರಾವತಿ ಚಿತ್ರ.

ನಾ.ಡಿ’ಸೋಜ ಅವರ ‘ಹಿನ್ನೀರಿನ ದಂಡೆಯ ಮೇಲೆ ಕಂಬಳಿ ಹೊದ್ದು ಕುಳಿತವ’ ಕತೆಯನ್ನಯ ಚಿತ್ರವಾಗಿಸಿರುವ ಪ್ರಶಾಂತ್ ಅದಕ್ಜೆ ಶಿವಮೊಗ್ಗದ ಅಂಬೆಗಾಲು ಕಿರುಚಿತ್ರೋತ್ಸವದಲ್ಲಿ ಅತ್ಯುತ್ತಮ ಛಾಯಾಗ್ರಹಣ ಮತ್ತು ಅತ್ಯುತ್ತಮ ನಿರ್ದೇಶನ ಹೀಗೆ ಮೂರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ‘ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ ಮತ್ತು’ ಮಲೆನಾಡು ಕಿರುಚಿತ್ರೀತ್ಸವ’ ಗಳಲ್ಲಿ ಪ್ರದರ್ಶನ ಕಂಡಿರುವ ಈ ಚಿತ್ರಕ್ಕೆ ಆಯುಶ್ ಟಿವಿಯಲ್ಲಿನ ‘ಕಾದಂಬರಿ ಆಧಾರಿತ ಕಿರುಚಿತ್ರ’ ಪ್ರಶಸ್ತಿ ದೊರಕಿದೆ.

ನಾಲ್ಕು ಪುಟಗಳ ಕತೆಯನ್ನು ಐದು ದಿನಗಳ ಕಾಲ ಚಿತ್ರೀಕರಣ  ಮಾಡಿ 16 ನಿಮಿಷಗಳ ಚಿತ್ರ ರೂಪಕ್ಕೆ ತಂದಿರುವ ಪ್ರಶಾಂತ್ ಅದರಲ್ಲಿ 1964 ರಲ್ಲಿ ನಿರ್ಮಾಣಗೊಂಡ ಲಿಂಗನಮಕ್ಕಿ ಅಣೆಕಟ್ಟಿನ ಹಿನ್ನೀರಿನಿಂದ ಸಂತ್ರಸ್ತರಾದವರ ಪರಿಸ್ಥಿಯನ್ನು ತೆರೆದಿಟ್ಟಿದ್ದಾರೆ. ಒಂದು ಕಡೆ ವಿದ್ಯುತ್ ನೀಡುವ ಡ್ಯಾಮ್ ಗಳು ದೀಪದ ಕೆಳಗೆ ಕತ್ತಲು ಎನ್ನುವ ಹಾಗೆ ಸ್ಥಳೀಯರನ್ನು ಹೇಗೆ ಅಂಧಕಾರಕ್ಕೆ ದೂಡುತ್ತವೆ ಎನ್ನುವುದನ್ನು ಹೇಳುವ ಪ್ರಯತ್ನ ಚಿತ್ರದ ಮೂಲಕ ಮಾಡಿರುವುದಾಗಿ ಅವರು ಹೇಳುತ್ತಾರೆ. ದೇಸಿ ಸೃಜನಶೀಲತೆಯ ಆಗರ ಪ್ರಶಾಂತ್ ಸಾಗರ

ಮೊದಲ ನೋಟಕ್ಕೆ ಕಾಲೇಜ್ ಹುಡುಗನಂತೆ ಕಾಣಿಸುವ ಪ್ರಶಾಂತ್ ಸಾಗರ ಕನ್ನಡ ಚಿತ್ರರಂಗದ ಯುವ ಪ್ರತಿಭೆ. ಕಳೆದ ಏಳು ವರ್ಷಗಳಿಂದ ಸಹಾಯಕ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದ ಇವರ ಪ್ರತಿಭೆಯನ್ನು ಅನಾವರಣಗೊಳಿಸಿದ್ದು, ಖುದ್ದು ನಿರ್ದೇಶಿಸಿ ಛಾಯಾಗ್ರಹಣ ನಿರ್ವಹಿಸಿದ ಶರಾವತಿ ಚಿತ್ರ.

 

Prashanth Sagara 3.jpg

ನಾ.ಡಿ’ಸೋಜ ಅವರ ‘ಹಿನ್ನೀರಿನ ದಂಡೆಯ ಮೇಲೆ ಕಂಬಳಿ ಹೊದ್ದು ಕುಳಿತವ’ ಕತೆಯನ್ನಯ ಚಿತ್ರವಾಗಿಸಿರುವ ಪ್ರಶಾಂತ್ ಅದಕ್ಜೆ ಶಿವಮೊಗ್ಗದ ಅಂಬೆಗಾಲು ಕಿರುಚಿತ್ರೋತ್ಸವದಲ್ಲಿ ಅತ್ಯುತ್ತಮ ಛಾಯಾಗ್ರಹಣ ಮತ್ತು ಅತ್ಯುತ್ತಮ ನಿರ್ದೇಶನ ಹೀಗೆ ಮೂರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ‘ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ ಮತ್ತು’ ಮಲೆನಾಡು ಕಿರುಚಿತ್ರೀತ್ಸವ’ ಗಳಲ್ಲಿ ಪ್ರದರ್ಶನ ಕಂಡಿರುವ ಈ ಚಿತ್ರಕ್ಕೆ ಆಯುಶ್ ಟಿವಿಯಲ್ಲಿನ ‘ಕಾದಂಬರಿ ಆಧಾರಿತ ಕಿರುಚಿತ್ರ’ ಪ್ರಶಸ್ತಿ ದೊರಕಿದೆ.

 

ಪ್ರತಿಭಾರಂಗ

ಹೆಸರೇ ಸೂಚಿಸಿರುವಂತೆ ಪ್ರಶಾಂತ್ ಅವರು ಮೂಲತಃ ಸಾಗರದವರು. ದಶಕದಿಂದ ಬೆಂಗಳೂರಲ್ಲೇ ಇರುವ  ಇವರಿಗೆ ತಾತನ ತಲೆಮಾರಿನಿಂದಲೇ ರಂಗಭೂಮಿಯ ನಂಟು ಇದೆ. ವೃತ್ತಿರಂಭೂಮಿ ಕಲಾವಿದರಾಗಿದ್ದ ಪ್ರಕಾಶ್ ಸಾಗರ್ ಅವರು ಪ್ರಶಾಂತ್ ಅವರ ತಂದೆಯಾಗಿದ್ದು. ದಿವಂಗತ ನಟ ಸುಧೀರ್  ಅವರ ಜೊತೆಗೆ ನಾಟಕಗಳಲ್ಲಿ ಪಾತ್ರ ಮಾಡಿದ್ದಂಥವರು. ತಾಯಿ ಪುಷ್ಪಾ ಸಾಗರ ಅವರು ನಾಟಕ ಅಕಾಡೆಮಿಯಿಂದ ಪ್ರಶಸ್ತಿಗೆ ಭಾಜನರಾದಂಥ ಕಲಾವಿದೆಯಾಗಿದ್ದು ಈಗಲೂ ರಂಗಭೂಮಿಯಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದಾರೆ. ಬಹುಶಃ ಇದೇ ಕಲೆಯ ಸಾಂಗತ್ಯಅವರನ್ನು ಇಂದು ಸಿನಿಮಾ ಜೊತೆಗೆ ಓದಿನ ಹವ್ಯಾಸವನ್ನು ಕೂಡ ಬೆಳೆಸಿದೆ ಎನ್ನಬಹುದು.

 

 

ವಿಸ್ಮಯ ಲೋಕ

ಪುಸ್ತಕಗಳನ್ನು ಓದುವುದು, ವನ್ಯತಾಣಗಳಿಗೆ ಆರೋಗ್ಯಕರ ರೀತಿಯಲ್ಲಿ ಪ್ರವಾಸ ಹೋಗುವುದು ಮೊದಲಾದ ಉತ್ತಮ ಹವ್ಯಾಸಗಳನ್ನು ಇರಿಸಿಕೊಂಡವರು. ಯಂಡಮೂರಿ ವೀರೇಂದ್ರನಾಥರಿಂದ ಕಾದಂಬರಿಗಳಿಂದ ಹಿಡಿದು ಭೈರಪ್ಪ,ಅನಕೃ, ತರಾಸು, ಕುಂ.ವೀರಭದ್ರಪ್ಪ, ತೇಜಸ್ವಿ, ಅನಂತಮೂರ್ತಿ ಹೀಗೆ ಸಾಹಿತ್ಯ ಲೋಕದ ದಿಗ್ಗಜರ ಕೃತಿಗಳನ್ನೆಲ್ಲ ರೋದು ಇವರು ಇಂದಿನ ಯುವಕರಿಗೆ ಪುಸ್ತಕಗಳು ಪ್ರಿಯವಲ್ಲ ಎನ್ನುವ ಆರೋಪಕ್ಕೆ ಅಪವಾದವಾಗಿದ್ದಾರೆ. ಅದರಲ್ಲಿ ಕೂಡ ತಾವು ಓದಿ ಮೆಚ್ಚಿ ಕೊಂಡ ಹತ್ತಾರು ಸಾಲುಗಳನ್ನು ಫೇಸ್ಬುಕ್ ಗಳಲ್ಲಿ ಮತ್ತು ಆತ್ಮೀಯ ಸ್ನೇಹಿತರಿಗೆ ವಾಟ್ಸ್ಯಾಪ್ ಗಳಲ್ಲಿ ಕಳುಹಿಸುವ ಮೂಲಕ ಸಾಮಾಜಿಕ ಜಾಲತಾಣವನ್ನು ಎಷ್ಟು ಚೆನ್ನಾಗಿ ಉಪಯೋಗಿಸಬಹುದು ಎನ್ನುವುದಕ್ಕೆ ಮಾದರಿಯಾಗಿದ್ದಾರೆ. ಜೊತೆಗೆ ವನ್ಯತಾಣಗಳಿಗೆ ಪ್ರವಾಸ ಹೋಗುವುದು ಮಾತ್ರವಲ್ಲ, ವನ್ಯಜೀವಿಗಳ ಕುರಿತಾದ ಡಾಕ್ಯುಮೆಂಟರಿಗಳನ್ನು ಮಾಡುತ್ತಿದ್ದಾರೆ. ಅವುಗಳಿಗೆ ‘ವಿಸ್ಮಯ ಲೋಕ’ ಎನ್ನುವ ಹೆಸರಿಟ್ಟಿದ್ದು ಭಾಗ 1 ರಲ್ಲಿ ‘ಮಲಬಾರ್ ಗುಳಿಮಂಡಲ ಹಾವು’ ಗಳ ಬಗ್ಗೆ ಡಾಕ್ಯುಮೆಂಟರಿ ಸಿದ್ಧಪಡಿಸಿದ್ದಾರೆ.

ಪ್ರಸ್ತುತ ಬಿ.ಎಂ.ಗಿರಿರಾಜ್ ಅವರ ವೆಬ್ ಸಿರೀಸ್ ರಕ್ತಚಂದನಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಸದ್ಯದಲ್ಲೇ ಸ್ನೇಹಿತರೊಬ್ಬರು ನಿರ್ದೇಶಿಸಲಿರುವ ಚಿತ್ರಕ್ಕೆ ಸ್ವತಂತ್ರ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅದರ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಅದರ ಜೊತೆಯಲ್ಲೇ  ಪ್ರಶಾಂತ್ ಅವರು ಮತ್ತೊಂದು ಕಿರುಚಿತ್ರ ನಿರ್ದೇಶಿಸುವ ಬಗ್ಗೆಯೂ ಯೋಜನೆ  ಹಾಕಿಸಿಕೊಂಡಿದ್ದಾರೆ.

 

 

ನಾ ಡಿಸೋಜಾರಿಗೆ ಕೃತಜ್ಞ

ಅಂದ ಹಾಗೆ ಮೊದಲ ಬಾರಿ ಕಿರುಚಿತ್ರವೊಂದನ್ನು ನಿರ್ದೇಶಿಸುವಾಗ, ಅದರಲ್ಲಿಯೂ ಶ್ರೇಷ್ಠ ಬರಹಗಾರರೊಬ್ಬರ ಕತೆಯನ್ನು ಆಧಾರವಾಗಿಸಿ ಚಿತ್ರ ಮಾಡುವಾಗ ಆದ ಅನುಭವ ಹೇಗಿತ್ತು ಎನ್ನುವುದನ್ನು ಪ್ರಶಾಂತ್ ಅವರು ತಮ್ಮದೇ ಮಾತುಗಳಲ್ಲಿ ಹೀಗೆ ಹೇಳುತ್ತಾರೆ.’ ಬಾಲ್ಯದಲ್ಲಿಬಾಲಮಂಗಳದಲ್ಲಿ ಬರುತ್ತಿದ್ದ ನಾ.ಡಿಸೋಜ ಅವರ ಮಕ್ಕಳ ಕತೆಗಳನ್ನು ಓದುತ್ತಲೇ ಬೆಳೆದವನು ನಾನು. ಚಿತ್ರರಂಗದಲ್ಲಿ ಅವಕಾಶಕ್ಕಾಗಿ ನಮ್ಮ ಕೆಲಸದ ಮೂಲಕ ಗುರುತಿಸಿಕೊಳ್ಳಲು ಕಿರುಚಿತ್ರ ಮಾಡಬೇಕೆಂದು ಹೊರಟಾಗ  ನನಗೆ ಮೊದಲು ನೆನಪಾದದ್ದೇ ನಾ.ಡಿಸೋಜ ಅವರ ಕೃತಿಗಳು.

ಲಿಂಗನಮನಕ್ಕಿ ಜಲಾಶಯದ ವಿಹಂಗಮ ದೃಶ್ಯವನ್ನು ಪ್ರವಾಸಿಗರು ಕಂಡಾಗ ಬೆರಗಾಗಿ ವಾವ್ ಎನ್ನದೆ ಇರಲಾರರು. ಮಾನವನ ಅಭೇದ್ಯ ಬುದ್ಧಿಶಕ್ತಿಗೆ ಈ ಅಣೆಕಟ್ಟು ಒಂದು ಅತ್ಯುತ್ತಮ ಉದಾಹರಣೆ. ಆದರೆ ಅಣೆಕಟ್ಟಿನ ಹಿಂದೆ ಸಾಗರೋಪಾದಿಯಲ್ಲಿ ನೂರಾರು ಮೈಲಿಗಳವರೆಗೆ ನಿಂತ ನೀರು ಕೇವಲ ನೀರಾಗಿರದೆ ತನ್ನೊಳಗೆ ಸಹಸ್ರಾರು ಜನರ ಕಣ್ಣೀರನ್ನು ಅಡಗಿಸಿಕೊಂಡಿದೆ; ಹೃದಯ ಕಲಕುಇವ ನೂರಾರು ನೈಜ ಕತೆಗಳನ್ನು ಇರಿಸಿಕೊಂಡಿದೆ, ಜಲಾಶಯ ನಿರ್ಮಾಣವಾಗುವ ಮೊದಲು ಸುಮಾರು 152 ಹಳ್ಳಿಗಳನ್ನು 3847 ಕುಟುಂಬಗಳನ್ನು ಅಲ್ಲಿಂದ ಸ್ಥಳಾಂತರಿಸಲಾಯಿತು. ಅಣೆಕಟ್ಟು ಪೂರ್ಣಗೊಂಡು ಅದರಲ್ಲಿ ನೀರು ನಿಲ್ಲತೊಡಗಿದಂತೆ ಸರ್ಕಾರ ಮುಳಗಡೆಯಾಗಲಿರುವ ಹಳ್ಳಿಗಳನ್ನು ಒಂದೊಂದಾಗಿ ಖಾಲಿ ಮಾಡಿಸಿತು. ಸಾವಿರಾರು ಜನ ಶತಮಾನಗಳಿಂದ ಬಾಳಿ ಬದುಕಿದ ಹಳ್ಳಿ, ಮನೆ, ಹೊಲಗದ್ದೆಗಳೆಲ್ಲಾ ಜಲಸಮಾಧಿಯಾಯಿತು. ಆಗ ಲೋಕೋಪಯೋಗಿ ಇಲಾಖೆಯಲ್ಲಿ ಶರಾವತಿ ಯೋಜನಾ ಪ್ರದೇಶದಲ್ಲಿದ್ದ ಸಾಹಿತಿ ನಾ.ಡಿಸೋಜ ಅವರು ತಾವು ಕಣ್ಣಾರೆ ಕಂಡ ಈ ಎಲ್ಲಾ ನೈಜ ದೃಶ್ಯಗಳಿಗೆ ಅಕ್ಷರಗಳ ರೂಪ ಕೊಟ್ಟು ಹಲವಾರು ಕತೆ ಕಾದಂಬರಿಗಳನ್ನು ಬರೆದಿದ್ದಾರೆ. ಅಂತಹ ಕತೆಗಳಲ್ಲಿ ಒಂದಿ ‘ ಹಿನ್ನೀರಿನ ದಂಡೆಯ ಮೇಲೆ ಕಂಬಳಿ ಹೊದ್ದು ಕುಳಿತವ’.

 

 

 

 

 

 

 

 

 

 

 

 

 

 

 

 

 

 

 

 

 

 

 

Prashanth Sagara With NA Desouza.JPG
Prashanth Sagara 2.JPG

ಈ ಹಿಂದೆ ಸುರೇಶ್ ಹೆಬ್ಳೀಕರ್ ಅವರು ‘ಕಾಡಿನ ಬೆಂಕಿ’ ಕಾದಂಬರಿಯನ್ನು, ಗಿರೀಶ್ ಕಾಸರವಳ್ಳಿಯವರು ‘ದ್ವೀಪ’ ಕಾದಂಬರಿಯನ್ನು, ಕೋಡ್ಲು ರಾಮಕೃಷ್ಣಅವರು ‘ಬೆಟ್ಟದಪುರದ ದಿಟ್ಟ ಮಕ್ಕಳು’ ಮಕ್ಕಳ ಕತೆಯನ್ನು ಚಲನಚಿತ್ರವನ್ನಾಗಿಸಿದ್ದರು. ಅವೆಲ್ಲ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪ್ರಶಸ್ತಿ ಗಳಿಸಿದ್ದವು. ಅಂಥ ಮೇರು ನಿರ್ದೇಶಕರುಗಳೇ ನಾ.ಡಿಸೋಜ ಅವರ ಅವರ ಬಳಿ ಚಲನಚಿತ್ರಕ್ಕಾಗಿ ಕಾದಂಬರಿಗಳನ್ನು ಕೇಳಿರುವಾಗ …ನನ್ನಂಥ ಸಾಮಾನ್ಯ ಓದುಗನೊಬ್ಬ ಪುಸ್ತಕದಲ್ಲಿ ಆಟೋಗ್ರಾಫ್ ಹಾಕಿಸಿಕೊಳ್ಳುವ ಹಾಗೆ,’ನಿಮ್ಮದೊಂದು ಕತೆಯನ್ನು ನಾನು ಕಿರುಚಿತ್ರ ಮಾಡಬೇಕೆಂದಿದ್ದೇನೆ ಕೊಡಿ ಸಾರ್..’ ಎಂದಾಗ ಮರುಮಾತಿಲ್ಲದೇ ‘ಆಯ್ತು ಮಾಡಿ’ ಎಂದರು. ‘ಸಿನಿಮಾರಂಗದಲ್ಲಿ ನಿನ್ನಅನುಭವ ಎಷ್ಟು? ಯಾರ್ಯಾರ ಬಳಿ ಕೆಲಸ ಮಾಡಿದೀಯ? ಅಂತೆಲ್ಲ ಒಂದೇ ಒಂದು ಪ್ರಶ್ನೆಯನ್ನು ಸಹ ಕೇಳಲಿಲ್ಲ. ನಾನು ಮಾಡಬೇಕೆಂದಿದ್ದ ಒಂದಷ್ಟು ಕತೆ ಬದಲಾವಣೆಗೂ ಕೂಡ ತಕ್ಷಣ ಒಪ್ಪಿಕೊಂಡಿದ್ದು ಅವರ ದೊಡ್ಡತನಕ್ಕೆ ಸಾಕ್ಷಿ. ಅಭಿವೃದ್ಧಿಯ ಹೆಸರಿನಲ್ಲೊಇ ಅಣೆಕಟ್ಟುಗಳಖ ನಿರ್ಮಾಣಕ್ಕಾಗಿ ಫಲವತ್ತಾಸದ ಕೃಷಿ ಭೂಮಿಯನ್ನು ಸರ್ಕಾರ ಆಕ್ರಮಿಸಿಕೊಂಡು ಅಲ್ಲಿನ ಜನ, ರೈತರನ್ನು ಸ್ಥಳಾಂತರಿಸುವ ಕ್ರೂರತೆಗೆ ಬೆಳಕು ಚೆಲ್ಲುವ ಪ್ರಯತ್ನ ‘ಶರಾವತಿ’ ಕಿರುಚಿತ್ರ.

Rate UsDon’t love itNot greatGoodGreatLove itRate Us
bottom of page