top of page

ಕಿರುಚಿತ್ರ

ಮೊದಲೆಲ್ಲ ಹೊಸಬರು ಚಿತ್ರರಂಗಕ್ಕೆ ಬಂದಾಗ ಹತ್ತಾರು ವರ್ಷ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಆನಂತರದಲ್ಲಿ ಎಲ್ಲೋ ಅಪರೂಪಕ್ಕೆ ನಿರ್ದೇಶಕರಾಗಿ ಕೆಲಸ ಸಿಗುತ್ತಿತ್ತು. ಆದರೆ  ಇಂದು ಕಾಲ ಬದಲಾಗಿದೆ. ಹೊಸಬರ ತಂಡದಲ್ಲಿ ನಿರ್ದೇಶಕರು ಕೂಡ ಹೊಸಬರೇ ಇರುತ್ತಾರೆ. ಬಹಳಷ್ಟು ಬಾರಿ ಇದರಿಂದ ಕಳಪೆ ಗುಣಮಟ್ಟದ ಚಿತ್ರಗಳ ಸೃಷ್ಟಿಯಾಗುತ್ತವೆ. ಆದರೆ ಕೆಲವೊಮ್ಮೆ ಹೊಸದಾಗಿ ಬಂದು ಪ್ರಥಮ ಪ್ರಯತ್ನದಲ್ಲೇ ಉತ್ತಮ ಚಿತ್ರ ಮಾಡುವವರೂ ಇರುತ್ತಾರೆ. ಹಾಗಾಗಿ ಹೊಸ ನಿರ್ದೇಶಕರನ್ನು ಆಯ್ಕೆ ಮಾಡುವಾಗ ಯಾವ ಮಾನದಂಡ ಅನುಸರಿಸಬೇಕು ಎನ್ನುವ ಗೊಂದಲಕ್ಕೆ ಬೀಳುವವರೂ ಇದ್ದಾರೆ. ಇಂಥ ಸಂದರ್ಭದಲ್ಲಿ ಸುಲಭದ ಆಯ್ಕೆಗೆ ಪೂರಕವಾದ ಮಾರ್ಗವೊಂದು ಇತ್ತೀಚೆಗೆ ಹೆಚ್ಚು ಪಸರಿಸುತ್ತಿದೆ. ಅದುವೇ ಕಿರು ಚಿತ್ರ. ಗಮನ ಸೆಳೆಯುವಂಥ ಶಾರ್ಟ್  ಮೂವಿಗಳನ್ನು ಮಾಡಿ ಅವುಗಳನ್ನು ನಿರ್ಮಾಪಕರಿಗೆ ತೋರಿಸಿ ತಮಗೆ ಸಿನಿಮಾ ನಿರ್ದೇಶಿಸುವ ಅವಕಾಶ ಮಾಡಿಕೊಡುವಂತೆ ಕೇಳಿಕೊಳ್ಳುವ ಮತ್ತು ಆ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಅದೇ ಕಾರಣಕ್ಕೆ ಶಾರ್ಟ್ ಮೂವಿಗಳು ಕೂಡ ಹೆಚ್ಚಾಗುತ್ತಿವೆ. ಕಿರು ಚಿತ್ರಗಳ ಉತ್ಸವ, ಸ್ಪರ್ಧೆ ನಡೆಯುತ್ತಿರುವ ಈ ಕಾಲದಲ್ಲಿ ಅವುಗಳ ಕುರಿತಾದ ವಿವರವನ್ನು ನೀಡುವಂಥ ವಿಭಾಗವೇ ನಮ್ಮ ವಿಶೇಷ ಅಂಕಣವಾದ ಕಿರು ಚಿತ್ರಣ. ಇದು ಕಿರುಚಿತ್ರಗಳ ಮೂಲಕ ಚಿತ್ರೋದ್ಯಮದ ಗಮನ ಸೆಳೆಯಬಯಸುವವರಿಗೆ ವರದಾನವಾಗುವುದರಲ್ಲಿ ಸಂದೇಹವೇ ಇಲ್ಲ.

Shree new2.jpg

January 03, 2020

ಕಿರುಚಿತ್ರ

bottom of page